ಗುರುವಾರ, ಅಕ್ಟೋಬರ್ 25, 2012

ನಿನ್ನ ತುಂಟ ಮಾತಲ್ಲಿ ನನ್ನ ಹೆಸರು...

ನಿನ್ನ ಹೆಸರಲ್ಲಿ ನನ್ನ ಹೆಸರ ಸೇರಿಸಿ
ಮನವು ಹಾಡುತಿಹುದು ಏಕಾಂತದಿ;
ನಿನ್ನ ತುಂಟ ಮಾತಲ್ಲಿ
ನನ್ನ ಹೆಸರ ಕೇಳಲು
ನಿನ್ನ ಮನದ ಬಾಗಿಲಲ್ಲಿ
ಕುರ್ಚಿ ಹಾಕಿ ಕಾದಿರುವೆ!!!

ನಿನ್ನ ಪ್ರೇಮಾನುಭವದಲ್ಲಿ
ನನ್ನ ನಾ ಮಾರಿಕೊಳ್ಳಲು ಬಂದಿರುವೆ.


ನಿನ್ನ ಕನಸಿನ ಚಂದ್ರನ
ಕಳಿಸುವೆಯಾ ನನ್ನ ಊರಿಗೆ
ಈ ಏಕಾಂತದ ಕಾರ್ಮೋಡವು ನನ್ನ ಆವರಿಸಿದೆ!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ