ನನ್ನ ಒಲವಿನ ಸಾಗರದ ಭಾವನೆಯ ಅಲೆಗಳು,
ನಿನ್ನ ನೆನಪಿನ ದಡವ ಆಲಂಗಿಸಲು ಬರುತಿಹುದು .
ತನ್ನ ಎಲ್ಲೆಯ ಮೀರಿ ಹಾರುತಿಹುದು!!!
ನೀ ಇರಲು ಭುವಿಯಲ್ಲಿ, ತಾರೆಗಳ ಮರೆತ
ಮೋಡಗಳು, ಬರುತಿಹೆವು ನಿನ್ನ ಸನಿಯಕೆ.
ಗಾಳಿಗೆ ತನ್ನಿರುವಿಕೆಯ ಅರಿವಾಗಿದೆ,
ನಿನ್ನ ಸುಂಗಧದ ಅನುಭವದಿಂದ.
ನಿನ್ನ ಕಣ್ಣ ಹೊಳಪಲ್ಲಿ ತನ್ನತಾ ಕಂಡು,
ಮುಂಜಾನೆಯ ಇಬ್ಬನಿಯು ನಾಚುತಿಹುದು!!!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ