ಮಂಗಳವಾರ, ಜನವರಿ 29, 2013

ಬದುಕು

                                               ಅರಿಯದ ವಯಸ್ಸಿನಲ್ಲಿ, ತಿಳಿಯದೆ ಪ್ರೀತಿ ಮಾಡಿ, 
                                               ಸೋತಾಗ ಅತ್ತು, ಬದುಕ್ಕೆಲ್ಲ ವ್ಯರ್ಥ, ಸಾವೊಂದೆ ಉತ್ತರ, 
                                               ಅಂದುಕೊಂಡವನು ಮೂರ್ಖ. 
                                               ಬದುಕು ನಮ್ಮ ನಾಯಕ. ಅವನ ಮುಂದೆ ನೀ ಬಾಲಕ. 
                                               ನಡೆ ನೀ ಅವನ ಹಿಂದೆ, ಬೆಳಕುಂಟು ನಿನಗೂ ಮುಂದೆ.

ಮನುಜ ಮತ

ಮನುಷ್ಯತ್ವದಡಿಯಿಲ್ಲದ ಮತವು,  
ಮನುಜನ ಮತಿಹೀನನಾಗಿಸುವುದು. 
ಜಾತಿಯ ಸಂಕೋಲೆಯು ಪಾಶವಿಕನಾಗಿಸುವುದು;

ಏಕಾಂಗಿ

ದುಃಖವಿದೇಕೆ ನಿನಗೆ ಏಕಾಂಗಿ,
ಇಲ್ಲವೆಂಬ ಶೂನ್ಯತೆಯಲಿ,
ಇರುವುದೆಲ್ಲವೂ ನಿನ್ನದಲ್ಲದಿರುವಾಗ,
ಕಳೆದುಕೊಂಡೆನೆಂಬ ಹುಸಿ ಭ್ರಮೆಯಲಿ,
ದುಃಖವಿದೇಕೆ ನಿನಗೆ ಏಕಾಂಗಿ;

ಸೋಮವಾರ, ಜನವರಿ 21, 2013

ಮರುಳ ಮನುಜ..


ಜಗಸಾಗರದೊಳು ಬದುಕ ದೋಣಿಯನೇರಿ,
ದೇವರೆನ್ನ ಅಂಬಿಗನೆಂಬ ಭ್ರಮೆಯಲಿ,
ಮತಿಯನು ಸುಖದ ದಾಸಿಯಾಗಿಸಿ,
ಕನಸಿನ ಹುಟ್ಟನ್ನು ಹಿಡಿದು,
ಮೋಹದೂರಿಗೆಮ್ಮ ಪಯಣ!!!





ಸುಖದಲೆಗಳಲಿ ತೇಲಾಡಿ,
ನೋವ ಸುಳಿಯಲಿ ಹೋರಾಡಿ,
ಸಾವ ದಡವ ಸೇರಬಯಸದೆ,
ಹುಸಿಯನೆ ಜೀವಾಳವಾಗಿಸಿ,
ಸಾಗರವೇ ನಮ್ಮದೆಂದಿಹರು ಈ ಮರುಳ ಮನುಜರು!!!

ಬದುಕು ಸ್ವಾರ್ಥಿಗಳ ಸಂತೆ.



ಬದುಕ ಸಂತೆಗೆ ಆಸೆಗಳ ಬುತ್ತಿ ಹೊತ್ತು,
ಸ್ವಾರ್ಥದ ಬೆಲೆಗೆ, 
ಜಗವ ಕೊಳ್ಳಲು ಬಂದಿಹೆವು ನಾವು!
ದೇವರಿಲ್ಲಿ ವರ್ತಕನು,
ಪುಣ್ಯದ ಬೆಲೆಗೆ,ನಗುವನ್ನು ಮಾರಿಹನು!!

ನನ್ನೊಲವಿನ ಚಂದನವೆ ಕರಗದಿರು



ಒಂದು ದಿನದ ಉಡುಗೊರೆಯು ನಿನ್ನ ಸೌಂದರ್ಯ,
ಮನವು ಜನ್ಮಾಂತರದ ನಲುಮೆಯ ಹೂವು,
ಬದುಕು ಮಣ್ಣಲ್ಲಿ ಕೊನೆಯಾದರು,  
ಕರಗದು ನನ್ನೊಲವಿನ ಚಂದನವು!! 

ಬುಧವಾರ, ಜನವರಿ 16, 2013

ಧ್ಯಾನವೇ ಪ್ರೇಮ...

ಎಲ್ಲಾ ಯೋಚನೆಗಳ, ಯೋಜನೆಗಳ ಮೀರಿದ್ದು ಪ್ರೀತಿ,
ಅಡಗಿದೆ ವಿಷವನ್ನು ಅಮೃತವಾಗಿಸುವ ಶಕ್ತಿ,
ಪ್ರೀತಿಯಲಿ ಗೆದ್ದವನಿಗೆ ಜೀವನವೆ ಸಂಗಾತಿ,
ಧ್ಯಾನಿಗಲ್ಲದೆ, ಭಿಕ್ಷುಕನಿಗೆ ಸಿಗದು ಪ್ರೀತಿಯಲಿ ಮುಕ್ತಿ!!!   


ಹೆಣ್ಣು-ನೀ ದೇವತೆ.

                                          ಕಾಣು ನೀ ಪ್ರತಿ ಹೆಣ್ಣಿನೊಳು ದೇವತೆಯ,
                                          ಪ್ರೀತಿಯ ಸುಧೆ ಹರಿಸಿ,ಮಮತೆಯ ಸಿಹಿ ಉಣಿಸಿ,    
                                          ತನ್ನ ಬದುಕ ಕಟ್ಟಿಹಳು ನಿನ್ನಾನಂದದಲಿ;
                                          ತಿರಿಸಾಲಾಗದು ಅವಳ ಋಣವನು,
                                          ಅಡವಿಟ್ಟರೂ  ನಿನ್ನೆಲ್ಲಾ ಜನ್ಮವನು,
                                          ಇರಲಿ ನಿನ್ನ ಪ್ರತಿ ಉಸಿರಲ್ಲೂ ಧನ್ಯತೆ,ಪೂಜ್ಯತೆ,ಕೃತಜ್ಞತೆ; 

                                        ಬೆಳಕಿನ ಜನನವಡಗಿದೆ, ಕತ್ತಲೆಯ ಕೊನೆಯುಸಿರಿನಲಿ,
                                       ಮನುಷ್ಯನ ಸಾವಡಗಿದೆ, ಮನುಷ್ಯತ್ವದ ಕೊನೆಗಾಲದಲಿ. 

                                                                            

ಮಂಗಳವಾರ, ಜನವರಿ 15, 2013

ಮನವೀ ಗಾಳಿಪಟ...



                         ಮನವೀ ಗಾಳಿಪಟ, ಪ್ರೀತಿಯ ತಂಗಾಳಿಯಲಿ ನರ್ತಿಸಿದೆ,
                              ನಿನ್ನುಸಿರಿನ ಮುಗಿಲ ಮುತ್ತಿಡಲು; ವಿರಹದ ಬಿರುಗಾಳಿಯಲಿ ನಡುಗಿದೆ,
                                                       ಹರಿಯದಿರಲಿಪ್ರೇಮ ಸೂತ್ರ.
                             ನಿನ್ನೊಲವಿನ ಕಾಣಿಕೆಯೇ, ನನ್ನೀ ಹೃದಯ ಗಾಳಿಪಟದ ಆಸರೆಯು, ಭರವಸೆಯು.