ಗುರುವಾರ, ಡಿಸೆಂಬರ್ 27, 2012

ಮಂಜಿನ ಹನಿ...

ದುಮ್ಮಿಕ್ಕುವ ಜಲಪಾತದಿ ನೀ ಮುತ್ತಿನ ಹನಿ.
ಆಗುವೆಯಾ ನನ್ನೊಲವಿನೆಲೆಯ ಮಂಜಿನ ಹನಿ?

ನಿನ್ನ ಕಣ್ಣು........

ನಿನ್ನ ಕಣ್ಣ ಸೆರಮನೆಯು, ಬಂಧಿಯಾಗಿಸಿದೆ ನನ್ನ ಈ ಜನ್ಮಕ್ಕೆ.
ಬಿಡುಗಡೆಯ ಆಸೆಯು ನನಗೇಕೆ? ಆಗಿರಲು ನಿನ್ನ ಕಣ್ಣು ಸ್ವರ್ಗದ ಶಾಖೆ.

ನಿನ್ನಾಗಮನವೆ ನನಗೆ ಅಮೃತ..



ನನ್ನ ಮನದ ಮೌನವು ಗುನುಗಿದೆ ನಿನ್ನೊಲವಿನಿಂಚರವ,
ಕೇಳೆಯಾ ನೀ ಗೆಳತಿ?
ಈ  ಕನಸಿನ ಬಣ್ಣವು ಕರಗಿದೆ ನಿನ್ನ ನಯನದ ಬೆಳಕಿಲ್ಲದೆ,
ನನ್ನೆದೆಯುಸಿರು ತಪಿಸಿದೆ ನಿನ್ನುಸಿರಿನ ಮಿಲನದಂಬಲದಲಿ!!!
ಈ ನೋವ ಸಾಗರವ ನಾನೀಜಬಲ್ಲೆ, ನಿನ್ನ ನೆನಪಿನ ಬಲದಲಿ,
ಉಲ್ಲಾಸದಮೃತವು ವಿಷವಾಗಿದೆ, ನೀನಿಲ್ಲದೆ!! 

ಪ್ರೀತಿಸು ಗೆಳತಿ ಒಂದು ಕ್ಷಣ

ನೀ ಜಗವ ಮರೆಸುವ ಮತ್ತು,
ಕನಸಲ್ಲೂ ಕನವರಿಸುವೆ ನಿನ್ನ ಹೆಸರು, ನನ್ನ ನಾ ಮರೆತು.
ಮೀಸಲು ನಿನ್ನೊಲವಿಗೆ ನನ್ನ ಪ್ರತಿ ಹುಟ್ಟು.
ನಗುವೆ ನಾ ಸಾವಲ್ಲು ಸಿಗಲು ನಿನ್ನ ಸವಿಮುತ್ತು .
ನನ್ನ ಮನದಲ್ಲಿ ನಿನ್ನದೇ ನೆನಪು ಪ್ರತಿ ಹೊತ್ತು .
ಪ್ರೀತಿಸು ಒಂದು ಕ್ಷಣ, ಬೆರಗಾಗುವ ಹಾಗೆ ಈ ಜಗತ್ತು.

ಸೋಮವಾರ, ಡಿಸೆಂಬರ್ 10, 2012

ನಿನ್ನೊಲವಿನ ಬೆಳಕು...

ನಿನ್ನೊಲವೇ ನನ್ನೀ ಬಾಳಿನ ಬೆಳಕು.
ನಿನ್ನ ನಗೆಯಂಚಿನ ಮಿಂಚು

ನನ್ನೆದೆಯ ಕಾರ್ಮೋಡವ ಸರಿಸಿ,
ಪ್ರೀತಿಯ ಮಳೆ ಸುರಿಸಿ,

ಕನಸುಗಳ ಹೊಳೆ ಹರಿಸಲು,
ಈ ಬಾಳು ಹಸಿರಾಯಿತು,
ನನ್ನೆದೆಗೆ ಉಸಿರಾಯಿತು. 

ಶುಕ್ರವಾರ, ನವೆಂಬರ್ 30, 2012

ಬಯಕೆ...

 
                      

        ಮುಂಜಾನೆಯ ಹೊಂಗಿರಣದಿ ನನ್ನಸವಿಮುತ್ತ  ಕಳುಹಿಸಿಹೆನು 
                         ಸ್ಪರ್ಶಿಸಲದು ನಿನ್ನ ಹಾಲ್ಗೆನ್ನೆಯ ಒಮ್ಮೆಯಾದರೂ !                         
                   ಮುಸ್ಸಂಜೆಯ ತಂಗಾಳಿಗೆ ನನ್ನ ಒಲವಿನ ಕಂಪ  ಬೆರೆಸಿಹೆನು              
               ನಿನ್ನ ಉಸಿರಾಗಲಿ ಅದು ಕನಸಿನಲ್ಲಾದರೂ !!                       

ಗುರುವಾರ, ನವೆಂಬರ್ 29, 2012

ಬೆಳಕಿನ ಆಲಿಂಗನ ..........


 
ಜಗದ ಸೊಬಗ ಸವಿಯಲು ಸೂರ್ಯನ ಕಣ್ಣಿದ್ದರೆ ಸಾಕೆ?
ಮನದ ಬಾಗಿಲಿಗೆ ಸ್ವಾರ್ಥದ ಕೀಲಿ ಹಾಕಿರಲು,
ಬದುಕು ಕತ್ತಲ ಕಾಡು!





 


           ಮನದ ಬಾಗಿಲ ತೆರೆದು ಜಗದ ಸೊಬಗ ಸವಿಯುವ ಬಾ,
           ಆಸೆಯ ಬೆಳಕಿನ ಸಹವಾಸ ನಮಗಿರಲು,
           ಕನಸಿನ ಕಾಮನಬಿಲ್ಲನು ಏರಿ,
           ಪ್ರೀತಿಯ ತಾಯಿಯ ಮಡಿಲಲ್ಲಿ ಮಗುವಾಗುವ ಬಾ!!

ಮುಸ್ಸಂಜೆಯ ಗೆಳತಿ

ನನ್ನ ಬಾಳಗೀತೆಯ ಪಲ್ಲವಿಯು ನೀನೆ,ಸಂದ್ಯಾರಾಗವು ನೀನೆ.
ನನ್ನ ಬಾಳ ಪಯಣದ ಆರಂಭವು ನೀನೆ, ಅಂತ್ಯವು ನೀನೆ.
ನಾ ಬರೆದ ಕವಿತೆಗಳ ಅರ್ಥವು ನೀನೆ, ಸ್ಪೂರ್ತಿಯು  ನೀನೆ,
ನನ್ನ ಎದೆಯ ಬಾಂದಳದಿ ಮುಂಜಾನೆಯು ನೀನೆ,ಮುಸ್ಸಂಜೆಯು ನೀನೆ!!

ಮಂಗಳವಾರ, ನವೆಂಬರ್ 27, 2012

ನಾ ಅಲೆಮಾರಿ ...



ನನ್ನೊಲವಿನ ದೇಗುಲದಿ ನೀ ದೇವತೆ,
ಆರಾಧಿಸಲೇ, ಆಲಂಗಿಸಲೇ ನಾನರಿಯೆ?
ನಿನ್ನ ಪ್ರೇಮದೂರಿನ ಅಲೆಮಾರಿ ನಾನು,
ಪರಚಯಿಸೆನ್ನ ನಿನ್ನೊಲವಿಗೆ, ಗೆಳತಿ!

ಪ್ರೀತಿಯ ಉಡುಗರೇ...



ಆಗಸದ ಮಳೆಯ ಆಲಿಂಗನವು ಭೂರಮೆಗೆ,
ವಸುದೇವಿಯ ಸಹ್ಯಾದ್ರಿಯೇ ಉಡುಗೊರೆಯು,ಆ ಪ್ರೇಮಿಗೆ!  

ಸೋಮವಾರ, ನವೆಂಬರ್ 26, 2012

ನನ್ನೊಲವಿನ ಹೂವು ಬಾಡುವ ಮುನ್ನ.........


ನನ್ನೊಲವಿನ ಹೂವು ನಿನ್ನ ಮುಡಿ ಸೇರಲಿ,  
ಬಾಡುವ ಮುನ್ನ!
     ಈ ಬಾಳ ಪಯಣದಿ ನೀ ಜೊತೆಯಾಗುವೆಯಾ?

ಮುಗಿಯುವ ಮುನ್ನ! 
ನನ್ನ ಉಸಿರಲ್ಲಿ ನಿನ್ನ ಸಹಿಯಿರಲಿ,             
ಸಾಯುವ ಮುನ್ನ!!!

ಮಂಗಳವಾರ, ನವೆಂಬರ್ 6, 2012

ನನ್ನ ಒಲವಿನ ಒಡತಿ...



ನನ್ನ ಮನದ ಮಲ್ಲಿಗೆಗೆ ನಿನ್ನ ಹೆಸರಿಟ್ಟಿರುವೆ,
ನನ್ನ ಕನಸಿನ ಕನ್ಯಗೆ ನಿನ್ನ ರೂಪವ ತೊಡಿಸಿರುವೆ,
ನನ್ನೊಲವಿನಾಗಸದ ಕಾಮನಬಿಲ್ಲಿಗೆ ನಿನ್ನ ಬಣ್ಣವ ಬಳೆದಿರುವೆ,
ನನ್ನ ಪ್ರೇಮದರಮನೆಗೆ  ನಿನ್ನರಸಿ ಮಾಡಿರುವೆ ಗೆಳತಿ,
ನನ್ನ ಒಲವಿನ ಒಡತಿ!!!

ಓ ನನ್ನ ಉಸಿರೇ .........



ಬರಬಾರದೆ ನೀ ಗೆಳತಿ
ಮಳೆಗಾಲದ ತಂಗಾಳಿಯ ಹಾಗೆ,
ಚಳಿಗಾಲದ ಹೊಂಬಿಸಿಲಿನ ಹಾಗೆ,
ನನ್ನ ಏಕಾಂಗಿ ಮನದ ಬೆಂಗಾಡಿಗೆ, 
ಬರಬಾರದೆ ನೀ ಗೆಳತಿ!!!

ಸೋಮವಾರ, ನವೆಂಬರ್ 5, 2012

ಬಯಸಿದೆ ನಿನ್ನಾಸರೆ...



                                        ನಿನ್ನ ನೋಡಿದ ಗಿಡಮರಗಳು,
                                              ಚಿಂರತನದ ನಗೆಬೀರಿರಲು.
                                       ನೀ ನಡೆದ ದಾರಿಯು, ಕೊನೆಯಾಗದ 
                                            ಕನಸು ಕಾಣುತ್ತಿರಲು.
                                       ನಿನ್ನಾಸರೆಯ ಬಯಸಿ ಬರುತ್ತಿರುವೆನು!!!

ಕನಸಿನ ಕಾಡಲ್ಲಿ.



ಕನಸಿನ ಕಾಡಲ್ಲಿ
ನನಸಿನ ಬೆಳಕಿನಡೆಗೆ
ಮುತ್ತಿನ ನೆನಪಲ್ಲಿ
ನೆನೆಪಿನ ಮತ್ತಿನಲ್ಲಿ
ಸನಿಯದ ಆಸೆಯ ಹೊತ್ತು
ಸಾಗುತ್ತಿದೆ ಬದುಕು!!!

ಕೇಳುವೆನಾ ನಿನ್ನ ಕಣ್ಣ ಭಾಷೆ...



                  ಪ್ರತಿಕ್ಷಣವು ನಿನ್ನದೆ ಪ್ರತಿರೂಪವು ಕಣ್ಣಲ್ಲಿ,
                                                             ಇರದಿದ್ದರೂ ನೀ ಎದುರಲ್ಲಿ.
                  ಕೇಳುವ ಪ್ರತಿ ನಿಯಲ್ಲೂ ನಿನ್ನ ಪ್ರತಿಧ್ವನಿಯು,
                                                             ನೀ ನುಡಿಯಲು ಮನದಲ್ಲಿ.
                 ನಿನ್ನ ನೋಡುವ ಆಸೆ ನನಗೆಲ್ಲಿ,
                                                           ಇರಲು ನೀ ಮನದಲ್ಲಿ!!

ಕೊಡುವೆಯಾ ಮುತ್ತಿನ ಸಂಬಳ ???



                                  ನನ್ನ ಮನದ ಮಾಲೀಕಳು ನೀನು,
                       ತಿಂಗಳಾಯಿತು ಚೆಲುವೆ,ಕೊಡುವೆಯಾ ಮುತ್ತಿನ ಸಂಬಳವ.
                       ಮಾಡುತಿರುವುದು ನನ್ನ ಮನವು,ನಿನ್ನ ನೆನೆಯುವ ಕೆಲಸ,
                             ಸಿಗುವುದೇನಗೆ ನಿನ್ನ ಸನಿಹದನುಭವದ ಬೋನಸ್ಸು??

ಓ ಗುಲಾಬಿಯೇ!!!


ಭೂದೋಟದ ಚೆಂಗುಲಾಬಿಯೇ,
ಯಾರೇ ನಿನ್ನ ಮಾಲಿಕನು,
ನಿನ್ನ ಚೆಂದವ ನೋಡಿ,
ಪಡೆಯುವ ಆಸೆ ಮೂಡಿ,
ಮನವು ಹಾರಲು ಹೊರಟಿದೆ ನಂಬಿಕೆಯ ಬೇಲಿ!!!!

ಚೆಲುವೇ, ನನ್ನೊಲವೇ...

                                                                                   
ಮುಂಗುರುಳ ಸರಿಸದಿರು,
ಮುಗುಳ್ನಗೆಯ ಮರೆಸದಿರು,
ಕೆಂದುಟಿಯ ಕಚ್ಚದಿರು,
ಕಣ್ಣ ಕಾಂತಿಯ ಆರಿಸದಿರು,
ಸವಿಗೆನ್ನೆಯ ಮುಚ್ಚದಿರು,
ನಾಚಿಕೆಯ ಬಂಗಾರ ಕಳಚದಿರು ಚೆಲುವೇ,ನನ್ನೊಲವೇ!!!

ಓ ನನ್ನ ಚೆಲುವೇ........


ನಿನ್ನ ಚೆಂದದ ಗಮತ್ತು,
ಪಡೆದವನಿಗೆಯೆ ಗೊತ್ತು.
ಫಲಿಸುವುದೇ ನನಗೆ ಸಂಪತ್ತು
ಹೇಳೇ ನೀ ಯಾರ ಸ್ವತ್ತು!!!

ಗುರುವಾರ, ನವೆಂಬರ್ 1, 2012

ನಾನರಿಯೇ ನಿನ್ನ ಮೌನದ ಮಾತು ....


ನೀ ನುಡಿಯದ ಮಾತಿನ ಅರ್ಥವೇನು ?
ನೀ ಬಾರದೆ ಹೋದ  ದಾರಿಯ ಕೊನೆಯೇನು ?
ನೀ ಹಾಡದೆ ಹೋದ ಹಾಡಿನ ಸ್ವರವೇನು ?
ನೀನಿರದ ಕನಸಿನ ಫಲವೇನು ???
ನಿನ್ನ ಮೌನವ ನಾನರಿಯೇ,
ನಿನ್ನ ಣ್ಣಾ ಭಾಷೆಯ ನಾ ತಿಳಿಯೇ,
ಉದ್ದರಿಸೆನ್ನ ಚೆಲುವೆ, ನಿನ್ನುತ್ತರದಿಂದ!!