ಗುರುವಾರ, ಅಕ್ಟೋಬರ್ 25, 2012

ಪ್ರೀತಿಯ ಪಯಣ

ಪ್ರೀತಿ ಹಾದಿಯ ಏಕಾಂಗಿ ಪಯಣ,
ನಿನ್ನ ಹೃದಯದೂರಿನೆಡೆಗೆ...
ಬರುವ ವೇಳೆಯ ತಿಳಿಸದೆಯೆ ಬಂದಿಹೆನು,
ಮನದ ಬಾಗಿಲ ತೆರೆಯುವೆಯಾ?
ನೋಡದೆ ದೂರ ಸರಿಯುವೆಯಾ? ನಾನರಿಯೆ...!!

ನಿನ್ನ ತುಂಟ ಮಾತಲ್ಲಿ ನನ್ನ ಹೆಸರು...

ನಿನ್ನ ಹೆಸರಲ್ಲಿ ನನ್ನ ಹೆಸರ ಸೇರಿಸಿ
ಮನವು ಹಾಡುತಿಹುದು ಏಕಾಂತದಿ;
ನಿನ್ನ ತುಂಟ ಮಾತಲ್ಲಿ
ನನ್ನ ಹೆಸರ ಕೇಳಲು
ನಿನ್ನ ಮನದ ಬಾಗಿಲಲ್ಲಿ
ಕುರ್ಚಿ ಹಾಕಿ ಕಾದಿರುವೆ!!!

ನಿನ್ನ ಪ್ರೇಮಾನುಭವದಲ್ಲಿ
ನನ್ನ ನಾ ಮಾರಿಕೊಳ್ಳಲು ಬಂದಿರುವೆ.


ನಿನ್ನ ಕನಸಿನ ಚಂದ್ರನ
ಕಳಿಸುವೆಯಾ ನನ್ನ ಊರಿಗೆ
ಈ ಏಕಾಂತದ ಕಾರ್ಮೋಡವು ನನ್ನ ಆವರಿಸಿದೆ!!

ಮಂಗಳವಾರ, ಅಕ್ಟೋಬರ್ 23, 2012

ಏನೆಂದು ವರ್ಣಿಸಲೇ ನಾ ನಿನ್ನ ....????



ನನ್ನ ಒಲವಿನ ಸಾಗರದ ಭಾವನೆಯ ಅಲೆಗಳು,             
ನಿನ್ನ ನೆನಪಿನ ದಡವ ಆಲಂಗಿಸಲು ಬರುತಿಹುದು .              
ಮುಸ್ಸಂಜೆಯ ತಿಳಿ ಆಗಸದ ನಿನ್ನ ಮುಖಚಂದ್ರನ ನೋಡಿ,    
ತನ್ನ ಎಲ್ಲೆಯ ಮೀರಿ ಹಾರುತಿಹುದು!!!                          
                                                                         ನೀ ಇರಲು ಭುವಿಯಲ್ಲಿ, ತಾರೆಗಳ ಮರೆತ
                                                                         ಮೋಡಗಳು, ಬರುತಿಹೆವು ನಿನ್ನ ಸನಿಯಕೆ.    
                                                                         ಗಾಳಿಗೆ  ತನ್ನಿರುವಿಕೆಯ ಅರಿವಾಗಿದೆ,
                                                                         ನಿನ್ನ ಸುಂಗಧದ ಅನುಭವದಿಂದ.
                                                                         ನಿನ್ನ ಕಣ್ಣ ಹೊಳಪಲ್ಲಿ ತನ್ನತಾ ಕಂಡು,
                                                                         ಮುಂಜಾನೆಯ ಇಬ್ಬನಿಯು ನಾಚುತಿಹುದು!!!

ನನ್ನೊಲವಿನ ಹೂವು


                                                       
           ಯಾವ ಕವಿಯ ಕವಿತೆಯು ದಾಟಲಾಗದು,
           ನಿನ್ನ ಪ್ರೇಮ ಪರ್ವತವ
           ಯಾವ ಭಾಷೆಯ ಪದವು ಬಂಧಿಸಲಾಗದು,
           ನಿನ್ನ ಕಣ್ಣೀನ ಭಾವನೆಯ!!!    
  
               ಬಿಡುವಾದಾಗ ತಡಮಾಡದೆ ನೀ 
           ನನ್ನೆದೆಯ ದಾರಿಯಲಿ ಬಂದರೆ!                         
           ನನ್ನೊಲವಿನೂವ ನಿನ್ನ ಮುಡಿಯಲಿರಿಸಿ,
           ನನ್ನ ಪ್ರೇಮ ಕವಿಗೆ ಪರಿಚಯಿಸುವೆ!!







ಸೋಮವಾರ, ಅಕ್ಟೋಬರ್ 22, 2012

ನಾ ಬಯಸಿದ ಪ್ರೀತಿ

      ಸ್ನೇಹ ಮತ್ತು ಭಾವನೆಗಳು ಹೃದಯದ ಭಾಗಗಳು.
              ಈ ಸ್ನೇಹ ಮತ್ತು ಭಾವನೆಗಳು ಸೇರಿದಾಗ ಹುಟ್ಟುವುದೇ "ಪ್ರೀತಿ".
              ನಾ ಬಯಸುವೆ ಸ್ನೇಹ ತುಂಬಿದ ಪ್ರೀತಿಯ, ಕೊಡುವೆಯ ಗೆಳತಿ,
           ನಾ ಪೋಸಿಸುವೇನು, ಈ ಜನ್ಮ ಇರೋವರೆಗೂ.  
     

ಯಾರಿಗೆ ಹೇಳೇ ನೀ ಯಾರಿಗೆ...???

ಯಾರಿಗೆ ಹೇಳೇ ನೀ ಯಾರಿಗೆ...???
          ನಿನ್ನ ಚೆಂದುಟ್ಟಿಯ ಸವಿಯು ಯಾರಿಗೆ
 ನಿನ್ನ ಮನದ ಹಂಬಲ ಯಾರಿಗೆ
        ನಿನ್ನ ಹೃದಯ ಸಿಂಹಾಸನ ಯಾರಿಗೆ
     ನಿನ್ನ ಒಲವಿನ ಉಂಗುರ ಯಾರಿಗೆ
ಯಾರಿಗೆ ಹೇಳೇ ನೀ ಯಾರಿಗೆ...???
          ನಿನ್ನ ಬಿಸಿ ಉಸಿರಿನ ಶಾಖ ಯಾರಿಗೆ
      ನಿನ್ನ ಕನಸಿನ ಸಾಲವು ಯಾರಿಗೆ
                   ನಿನ್ನ ಪ್ರೇಮ ಗೀತೆಯ ಪದಗಳು ಯಾರಿಗೆ
              ನಿನ್ನ ಮುಗುಳ್ನಗೆಯ ಮುತ್ತು ಯಾರಿಗೆ
                       ನಿನ್ನ ಕೋಮಲ ಸ್ಪರ್ಷದ ಅನುಭವು ಯಾರಿಗೆ
ಯಾರಿಗೆ ಹೇಳೇ ನೀ ಯಾರಿಗೆ....???

ಭಾನುವಾರ, ಅಕ್ಟೋಬರ್ 21, 2012

ನನ್ನ ಹೃದಯದ ನಿವೇದನೆ.......!!


ನನ್ನ ಹೃದಯದ ರಾಯಬಾರಿಯ ಕಳುಹಿಸಿಹೇನು,
ಸ್ವೀಕರಿಸು ಈ ಪ್ರೇಮದ ಕರೆಯ.
ನಿನ್ನ ನೆನಪಿನ ನಶೆಯ ಚಟಗಾರನಾಗಿರುವೇ,
ಉಳಿಸು ನಿನ್ನ ಪ್ರೇಮಾಮೃತದಿಂದ......!!

ಶುಕ್ರವಾರ, ಅಕ್ಟೋಬರ್ 19, 2012

ಮುದುಡುತಿರುವ ಪ್ರೀತಿ

                              ಈ ಹುಡುಗರು , ಗ್ಯಾಪ್ ಇಲ್ಲದೆ ಪ್ರೀತಿಯಲ್ಲಿ ಬಿದ್ದು,ಮಳೆಯಲಿ ಒದ್ದು,                                                                              heart ನಾ ಪಾಟ್ ಅಲ್ಲಿ ಪ್ರೀತಿ ಹೂವು ಅರಳಿ, 
                              ಅತ್ತ ಕಿಳೋಕು ಆಗದೆ, ಇತ್ತ ಕೊಡೋಕು ಆಗದೆ, ಹಾಗೆ ಒಣಗುತಿದೆ.

ಪ್ರೀತಿಯ ಅನ್ವೇಷಣೆಯಲ್ಲಿ...........


  ಮುಂದೊಮ್ಮೆ ನನ್ನ ಹುಡುಗಿಯ ನಗೆಯ ಪನ್ನೀರು ಸಿಗಲು
  ಕಣ್ಣೀನ ಕಿರಣದ ಕಾಂತಿಗಳು ಬೀಳಲು
  ನನ್ನ ಹೃದಯದ ಪ್ರೀತೀಯ ಹೂವು ಚಿಗುರುವ ಆಸೆ.