ನಿನ್ನ ನೆನಪುಗಳಲ್ಲೇ ಬದುಕುವ,
ಎನ್ನ ಕನಸುಗಳ ಸಿರಿಯ ಒಲವೆನ್ನಲೇ?
ನಾ ಬರೆದ ಪದಗಳೆಲ್ಲ ನಿನ್ನ ಹೆಸರಾಗಿ,
ಅದರಂದದ ಅಮಲಲಿ ಚಿಮ್ಮುವ
ಹರುಷದ ಹೊನಲ ಒಲವೆನ್ನಲೇ?
ನಿನ್ನ ಸನಿಹದ ಹಂಬಲದಲಿ ನಾಗೈವ,
ಈ ವಿರಹದ ತಪವನೇ ಒಲವೆನ್ನಲೇ?
ನಿನ್ನ ನಗೆ ಚಂದ್ರಮನ ಹೊಳೆವ ತಿಂಗಳ ಬೆಳಕನು
ಹೊದ್ದು ಮಲಗುವ ನನ್ನೀ ಸಡಗರವ ಒಲವೆನ್ನಲೇ?
ಒಲವೇನೆನ್ನಲು ನೀ ಗೆಳತಿ..
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ